Friday, August 26, 2011
ಚಿತ್ರದುರ್ಗದ ಕಲ್ಲಿನ ಕೋಟೆ
ಚಿತ್ರದುರ್ಗದ
ಕೋಟೆಯನ್ನು ೧೦ನೇ ಶತಮಾನದಿಂದ ಹಿಡಿದು ೧೮ನೇ ಶತಮಾನದ ವರೆಗೆ ರಾಷ್ಟ್ರಕೂಟ, ಚಾಲುಕ್ಯ,
ಹೊಯ್ಸಳ, ವಿಜಯನಗರ ಸಂಸ್ಥಾನ ಮುಂತಾದ ಅನೇಕ ಮಹಾನ ಸಂಸ್ಥಾನಗಳಿಂದ ಕಟ್ಟಲ್ಪಟ್ಟಿತು. ಈ
ಕೋಟೆಯಲ್ಲಿ ಏಳು ಭದ್ರವಾದ ಕಲ್ಲಿನ ಕೋಟೆಗಳನ್ನು ನಿರ್ಮಿಸಲಾಗಿದೆ. ಈ ಕೋಟೆಯಲ್ಲಿ
ಅನೇಕ ನೀರಿನ ಕೊಳಗಳನ್ನು ಒಂದಕ್ಕೊಂದು ಜೋಡಿಸಲಾಗಿದೆ ಮತ್ತು ಮಳೆ ನೀರು ಸಂಗ್ರಹ ಮಾಡಲು
ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಇಲ್ಲಿ ನೀರಿಗೆ ಎಂದಿಗೂ ತೊಂದರೆಯಾಗುವುದಿಲ್ಲ.
ಮದಕರಿ ನಾಯಕನ ಕಾಲದಲ್ಲಿ ಹೈದರಾಲಿಯ ಸೈನಿಕರು ಕೋಟೆಯ ಕಿಂಡಿಯಿಂದ ನುಗ್ಗಲು
ಯತ್ನಿಸಿದರು. ಇದನ್ನು ನೋಡಿದ ಅಲ್ಲಿನ ಕಾವಲುಗಾರನ ಪತ್ನಿ ಓಬವ್ವ ಒನಕೆಯಿಂದ ಒಳ
ನುಸುಳುತ್ತಿದ್ದ ಸೈನಿಕರನ್ನು ಹೊಡೆದು
ಸಾಯಿಸಿದಳು. ಈಗಲೂ ಅಲ್ಲಿ ಈ ಕಿಂಡಿಯನ್ನು ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ
ಮತ್ತು ಕೋಟೆಯನ್ನು ಶತ್ರುಗಳಿಂದ ರಕ್ಷಿಸಲು ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಧೈರ್ಯ
ಮೆರೆದ ಓಬ್ಬವ್ವ ಒನಕೆ ಓಬ್ಬವ್ವ ಎಂದು ಇತಿಹಾಸ ಪ್ರಸಿದ್ಧಳಾಗಿದ್ದಾಳೆ.
ಮುದ್ಗಲ ಕೋಟೆ

ಮುದ್ಗಲ
ಕೋಟೆಯು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಋಷಿಗಳಲ್ಲಿ ಏಳು ಬ್ರಹ್ಮರ್ಷಿಗಳು
ಮತ್ತು ಇಬ್ಬರು ರಾಜರ್ಷಿಗಳಿದ್ದಾರೆ. ವಿಶ್ವಾಮಿತ್ರ ಋಷಿ ಒಬ್ಬ ರಾಜರ್ಷಿಯಾಗಿದ್ದರೆ
ಮತ್ತೊಬ್ಬರು ಮುದ್ಗಲ ಋಷಿ. ಇವರು ತುಂಬಾ ಉದಾರಿಗಳು ಮತ್ತು ಕರುಣಾಮಯಿಯಾಗಿದ್ದರು. ಇವರು
ಮುದ್ಗಲೋಪನಿಷತ್ ಎಂಬ ಉಪನಿಷತ್ ಬರೆದಿದ್ದಾರೆ. ಮುದ್ಗಲ ಕೋಟೆಯಲ್ಲಿ ಅಶ್ವಥನಾರಾಯಣ,
ಶ್ರೀ ವೆಂಕಟೇಶ್ವರ, ನರಸಿಂಹ ಮತ್ತು ದಿಡ್ಡೇರಾಯರ ದೇವಸ್ಥಾನಗಳಿವೆ. ಮುದ್ಗಲ ಋಷಿ ಶಿಲಾಯುಗದವರಾಗಿದ್ದಾರೆ. ನಂತರ ೧೧ನೇ ಶತಮಾನದಲ್ಲಿ ದೇಶದ ಹಲವೆಡೆಯಿಂದ ಮಕ್ಕಳು ಬಂದು ಇಲ್ಲಿ ಕಲಿಯುತ್ತಿದ್ದರು.