ಮಿರ್ಜಾನ್
ಕೋಟೆಯು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಸಮುದ್ರ ದಂಡೆಯಲ್ಲಿದೆ. ಗೆರಸೊಪ್ಪದ ರಾಣಿ
ಚನ್ನಭೈರಾದೇವಿಯು ಈ ಕೋಟೆಯನ್ನು ೧೬ನೇ ಶತಮಾನದಲ್ಲಿ ನಿರ್ಮಿಸಿದಳು. ಅವಳು ಈ
ಕೋಟೆಯಲ್ಲಿಯೇ ವಾಸಿಸುತ್ತಾ ೫೪ ವರ್ಷ ಆಳ್ವಿಕೆಯನ್ನು ನಡೆಸಿದಳು. ಅವಳ ಆಳ್ವಿಕೆಯ
ಸಮಯದಲ್ಲಿ ಮೆಣಸಿನಕಾಳು, ಕಡ್ಡಿಯುಪ್ಪು ಮತ್ತು ಅಡಕೆಯನ್ನು ರಫ್ತು ಮಾಡುತ್ತಿದ್ದರು.
No comments:
Post a Comment