ಪ್ರವಾಸಿ ತಾಣಗಳ ಮರಗಳು, ಶಿಲ್ಪಗಳ ಮೇಲೆ ಶಾಶ್ವತವಾಗಿ ಉಳಿಯುವಂಥ ಕೆತ್ತನೆ ಕೀಟಲೆಗೆ ಕೈ ಹಾಕಬೇಡಿ.ಇಂಥ ಕ್ರಿಯೆ ಮಾಡುವವರಿಗೆ ತಿಳಿಹೇಳಿ. ಪ್ರಯಾಣಕ್ಕೆ ತೆರಳಿದ ತಾಣ ನೆನಪಿನಲ್ಲಿ ಉಳಿಸಿಕೊಳ್ಳುವ ಮನಸ್ಸು ನಿಮ್ಮದಾಗಿರಲಿ. ಸೂಚನೆ: ಚಿತ್ರಗಳ ಮೇಲೆ ಕ್ಲಿಕ್ಕಿಸಿ ಗ್ರಾತ್ರವನ್ನು ಹಿರಿದಾಗಿಸಿ ಓದುವ ಅನುಕೂಲವಿರುತ್ತದೆ.

Thursday, June 2, 2011

ಗಾಳಿಬೋರಿಗೆ ಹೋಗಿ ಮೀನು ಹಿಡಿದು ಜಾಲಿ ಮಾಡಿರಿ

ಅದೇ ಏಕತಾನತೆಯಿಂದ ಕೂಡಿದ ಮೂಮಾಲಿ ಔಟಿಂಗ್ ಸಾಕು. ಈ ಸಲ ನಿಮ್ಮ ವಾರಾಂತ್ಯ ವಿಹಾರದಲ್ಲಿ ಚೂರು ಬದಲಾವಣೆ ಇರಲಿ. ಕಾವೇರಿ ವನ್ಯಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕೆ ಈ ಸಲ ನಿಮ್ಮ ವಿಹಾರ ಗಾಳಿಬೋರ್ ನತ್ತ ಸಾಗಲಿ.


ಅಲ್ಲಿ ನೀವು ಬೋಟಿನಲ್ಲಿ ಕುಳಿತು ದೋಣಿ ಸಾಗಲಿ ಮುಂದೆ ಹೋಗಲಿ ಅಂತ ಗುನುಗಬಹುದು. ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಅಂತ ಹಾಡು ಹೇಳುತ್ತ ಮೀನಿಗೆ ಗಾಳ ಹಾಕಬಹುದು. ಸಿಕ್ಕ ಮೀನನ್ನು ಕೈಯಲ್ಲಿ ಹಿಡಿದು ತಕ್ಷಣ ನೀರಿಗೆ ಬಿಡಬಹುದು ಮತ್ತೆ ಪುನಃ ಗಾಳ ಹಾಕಬಹುದು. ಮತ್ತೆ..


ಇಲ್ಲಿನ ಕಾಡುವ ಕಾಡು, ಹಕ್ಕಿಗಳ ಕೂಗು, ಮೆಲುವಾಗಿ ಬೀಸುವ ಗಾಳಿ, ನಿಸರ್ಗದ ಬೆಡಗು, ಕಾನನದ ಸಖ್ಯ, ನದಿಯ ಬೆಡಗು, ಪ್ರಕೃತಿಯ ಬೆರಗು, ಜಲವಿಹಾರ ನಿಮ್ಮನ್ನು ಮಂತ್ರಮುಗ್ನರಾಗಿಸುತ್ತದೆ. ಅಲ್ಲಿ ನಿಮಗೆ ಮಾಮೂಲಿ ಪ್ರವಾಸಕ್ಕಿಂತ ಹೊಸ ಮಜಾ ಉಲ್ಲಾಸ ಸಿಗೋದಂತೂ ಗ್ಯಾರಂಟಿ.


ನಗರದ ಜಂಜಾಟ ಮರೆಯಲು ಒಮ್ಮೆಯಾದರೂ ಇಲ್ಲಿಗೆ ಹೋಗದಿದ್ದರೆ ಹೇಗೆ. ಸುಮಾರು 200 ಬಗೆಯ ಹಕ್ಕಿಗಳು, ಪ್ರಾಣಿಗಳನ್ನು ನೋಡುತ್ತ ಸಮಯ ಕಳೆಯಬಹುದು.


ಟ್ರಾವೆಲ್ ಒನ್ ಇಂಡಿಯಾದ ಮೂಲಕ ಗಾಳಿಬೋರಿಗೆ ಹೋಗಿರಿ.


ಹೀಗೆ ಹೋಗಿರಿ: ಗಾಳಿಬೋರ್ ಫಿಷಿಂಗ್ ಆಂಡ್ ನೇಚರ್ ಕ್ಯಾಂಪ್ ಬೆಂಗಳೂರು ಸಮೀಪದಲ್ಲಿದೆ. ಉದ್ಯಾನನಗರಿಯಿಂದ ಕೇವಲ ಎರಡು ಗಂಟೆಯ ಪ್ರಯಾಣ. ಅಂದರೆ ಬೆಂಗಳೂರಿನಿಂದ 110 ಕಿ.ಮೀ. ದೂರವಿದೆ. ಕನಕಪುರ ಮೂಲಕ ಸಂಗಮ್ ಗೆ ಪ್ರಯಾಣ ಬೆಳೆಸಿರಿ. ಕಾವೇರಿ ನದಿಯ ಸಂಗಮದಿಂದ ಹತ್ತು ಕಿಮೀ ದೂರದಲ್ಲಿ ದಟ್ಟ ಕಾನನ ನಿಮ್ಮನ್ನು ಸ್ವಾಗತಿಸುತ್ತದೆ.


ಯಾವಾಗ ಪ್ರಯಾಣ: ಜೂನ್ ನಿಂದ ಆಗಸ್ಟ್ ಇಲ್ಲಿಗೆ ಪ್ರಯಾಣ ಕೈಗೊಳ್ಳಲು ಹೆಚ್ಚು ಸೂಕ್ತ. ಈ ಸಮಯದಲ್ಲಿ ಕಾಡು ಹಸಿರು ಹೊದ್ದುಕೊಂಡಿರುತ್ತದೆ. ಹಕ್ಕಿಪ್ರೀಯರಿಗೂ ಇದು ಸಕಾಲ. ಬಗೆಬಗೆಯ ಹಕ್ಕಿಗಳನ್ನು ನೋಡಬಹುದು. ನಂತರದ ಸಮಯದಲ್ಲೂ ಇಲ್ಲಿಗೆ ಪ್ರಯಾಣ ಬೆಳೆಸಬಹುದು.


ಇಲ್ಲಿಗೆ ಬಂದವರಿಗೆ ವಸತಿ ಸೌಕರ್ಯ ಕೂಡ ನೀಡಲಾಗುತ್ತದೆ. ಅಂದ್ರೆ ಹತ್ತು ಟೆಂಟ್ ಕಾಟೇಜ್ ಗಳಿವೆ. ಇದು ಪರಿಸರ ಸ್ನೇಹಿ ಮನೆಗಳು. ಬಾತ್ ರೂಮ್ ಮತ್ತು ಎರಡು ಬೆಡ್ ಇರುವ ಈ ಪುಟ್ಟ ಮನೆ ಪ್ರವಾಸಿಗರಿಗೆ ಕಾಡಿನರಮನೆಯೇ ಸರಿ.


ಇಲ್ಲಿಗೆ ಎರಡು ದಿನದ ಪ್ರವಾಸ ಕೈಗೊಳ್ಳಬಹುದು. ಮಧ್ಯಾಹ್ನ 12 ಗಂಟಗೆ ಒಳಪ್ರವೇಶಿಸಿದರೆ ಮರುದಿನ 11 ಗಂಟೆಗೆ ಹೊರಕ್ಕೆ ಬರಬಹುದು. ಸುಮಾರು 3.300 ರು.ನಿಂದ ಇಲ್ಲಿನ ಶುಲ್ಕ ಆರಂಭವಾಗುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

No comments:

Post a Comment