ಪ್ರವಾಸಿ ತಾಣಗಳ ಮರಗಳು, ಶಿಲ್ಪಗಳ ಮೇಲೆ ಶಾಶ್ವತವಾಗಿ ಉಳಿಯುವಂಥ ಕೆತ್ತನೆ ಕೀಟಲೆಗೆ ಕೈ ಹಾಕಬೇಡಿ.ಇಂಥ ಕ್ರಿಯೆ ಮಾಡುವವರಿಗೆ ತಿಳಿಹೇಳಿ. ಪ್ರಯಾಣಕ್ಕೆ ತೆರಳಿದ ತಾಣ ನೆನಪಿನಲ್ಲಿ ಉಳಿಸಿಕೊಳ್ಳುವ ಮನಸ್ಸು ನಿಮ್ಮದಾಗಿರಲಿ. ಸೂಚನೆ: ಚಿತ್ರಗಳ ಮೇಲೆ ಕ್ಲಿಕ್ಕಿಸಿ ಗ್ರಾತ್ರವನ್ನು ಹಿರಿದಾಗಿಸಿ ಓದುವ ಅನುಕೂಲವಿರುತ್ತದೆ.

Saturday, June 25, 2011

ತಿರುಳ್‌ ಗನ್ನಡ ನಾಡು ಗದಗ ಜಿಲ್ಲೆ



  • ಈ ಬಾರಿಯ ನಮ್ಮ ಪಯಣ ತಿರುಗ್ಗನ್ನಡ ನಾಡು ಗದಗ ಜಿಲ್ಲೆಯತ್ತ. ಐತಿಹಾಸಿಕ ಮಹತ್ವ ಹೊಂದಿರುವ ಗದಗ ಕುಮಾರವ್ಯಾಸನ ಕಾರ್ಯಕ್ಷೇತ್ರ.

    ಮೊತ್ತ ಮೊದಲಾಗಿ ಗದಗ ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗಿರುವ ದೂರವನ್ನು ತಿಳಿಯೋಣ:

    ಶಿರಹಟ್ಟಿ - 26 ಕಿ.ಮೀ.

    ರೋಣ - 41 ಕಿ.ಮೀ.

    ಮುಂಡರಗಿ - 42 ಕಿ.ಮೀ.

    ನರಗುಂದ - 61 ಕಿ.ಮೀ.

    ಮಾಗಡಿ ಪಕ್ಷಿಧಾಮ - 25 ಕಿ.ಮೀ.


    ಐತಿಹಾಸಿಕ ಕಾಲದ ಸಮೃದ್ಧ ಪ್ರಾಂತ್ಯಗಳಾದ ಬೆಳೊÌಲ ಮತ್ತು ಪುಲಿಗೆರೆ ಇದ್ದ ಈ ಗದಗ ಕನ್ನಡನಾಡಿನ ಹೃದ್ಭಾಗದಲ್ಲಿರುವ ಸ್ವಾಭಿಮಾನದ ಬೀಡು. ಕ್ರತಪುರ, ಕಲ್‌ದುಗು, ಕರದುಗು, ಗರದುಗ... ಎಂದೆಲ್ಲ ಕರೆಸಿಕೊಂಡ ಈ ನಾಡು "ಗದುಗಿನ ಭಾರತ' ಖ್ಯಾತಿಯ ಕುಮಾರವ್ಯಾಸನ ಕಾರ್ಯಕ್ಷೇತ್ರವೂ ಹೌದು.

    ಶ್ರೀ ವನಿತೆಯರಸನೆ ವಿಮಲ ರಾ
    ಜೀವ ಪೀಠನ ಪಿತನೆ ಜಗಕತಿ
    ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ
    ರಾವಣಾಸುರ ಮಥನ ಶ್ರವಣ ಸು
    ಧಾ ವಿನೂತನ ಕಥನ ಕಾರಣ
    ಕಾವುದಾನತ ಜನವ ಗದುಗಿನ
    ವೀರನಾರಾಯಣ
    -ಕುಮಾರವ್ಯಾಸ
    ಗದುಗಿನ ವೀರನಾರಾಯಣನ  ಭಗವದ್‌ ವಿಲಾಸದಲ್ಲಿ ರೂಪಕ ಸಾಮ್ರಾಜ್ಯದ ಚಕ್ರವರ್ತಿ ನಾರಾಯಣಪ್ಪನು ಭಾಮಿನಿ ಪಟ³ದಿಯಲ್ಲಿ ಬರೆದ "ಭಾರತ ಕಥಾಮಂಜರಿ' ಸೃಷ್ಟಿಯಾದ ಪರಮಪಾವನ ಕ್ಷೇತ್ರವೇ "ಗದಗ'. 

    ಕಾವ್ಯಕ್ಕೆ ಗುರುವಿನೋಪಾದಿಯಲ್ಲಿದ್ದ ಕುಮಾರವ್ಯಾಸನ ಪಾದಸ್ಪರ್ಶದಿಂದ ಪುಳಕಿತವಾದ ಈ ಭೂಮಿ, ವೀರನಾರಾಯಣನ ದಿವ್ಯ ಸಾನ್ನಿಧ್ಯವಾಗಿ, ಸಾಹಿತಿಗಳಿಗೆ ಕಾವ್ಯದ ಮಡುವಾಗಿ, ಜಿಜ್ಞಾಸುಗಳಿಗೆ ವಿದ್ಯಾ ಕೇಂದ್ರವಾಗಿ, ಅಧ್ಯಾತ್ಮ  ಪಿಪಾಸುಗಳಿಗೆ ತತ್ವಜ್ಞಾನದ ನೆಲೆಯಾಗಿ ಇತಿಹಾಸ ದೃಷ್ಠಿ - ಸಾಹಿತ್ಯ ಸೃಷ್ಟಿಯ ಶ್ರೀಮಂತ ಸಂಸ್ಕೃತಿಯ ತವರಾಗಿದೆ .

    ಇದು ಕನ್ನಡನಾಡಿನ ಹೃದ್ಭಾಗ , ತಿರುಳ್‌ ಗನ್ನಡ ನಾಡಿನ ಮಧ್ಯಭಾಗದಲ್ಲಿದೆ. ವಕ್ಕುಂದ, ಕೋಪಣನಗರ, ಪುಲಿಗೆರೆ, ಪಟ್ಟದ ಕಿಸುವೊಳಲ್‌ ಇವು ತಿರುಳ್‌ ಗನ್ನಡ  ನಾಡಿನ ಪ್ರಾಚೀನ ನಗರಗಳಾಗಿವೆ .
    ಭದ್ರವಾದ ಸಾಂಸ್ಕೃತಿಕ ವೈಭವದ ತಳಹದಿಯಲ್ಲಿ ಭವ್ಯ ಪರಂಪರೆ ಹೊಂದಿದ ಗದಗ ಜಿಲ್ಲೆ ತನ್ನ ನಿಸರ್ಗ ಸಂಪತ್ತು, ಶಿಲ್ಪಕಲಾ ವೈಭವ , ಧರ್ಮನಿರಪೇಕ್ಷತೆ, ಸಂಗೀತ, ಸಾಹಿತ್ಯ , ಕಲೆ ಶ್ರೀಮಂತಿಕೆಯಿಂದ ನಾಡಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
    ಬೆಳವಲದ ಸಿರಿಯ ಸಮಪಾತಳಿಯ ಗದಗ ಜಿಲ್ಲೆ , ಕಪ್ಪು ಎರೆಯ ನಾಡು. ಗಿರಿ ಕಂದರಗಳು ಬಹಳಿಲ್ಲ , ಕಣ್ಣು ಹರಿಯುವವರೆಗೂ ಸಮತಟ್ಟು ಪ್ರದೇಶ. ಅಲ್ಲಲ್ಲಿ ದೇವಾಲಯ, ಪುಷ್ಕರಣಿ, ಕೆರೆ, ಬಾವಿ, ಗುಡ್ಡ, ಕೋಟೆ, ಕೊತ್ತಲ, ಬುರುಜು ಇತ್ಯಾದಿ ವಾಸ್ತು ವೈಭವಗಳು ಜಿಲ್ಲೆಯಲ್ಲಿ ಹರಡಿಕೊಂಡಿವೆ.

No comments:

Post a Comment