ಒಂದೆಡೆ ಐತಿಹಾಸಿಕ ನಂದನೇಶ್ವರ ದೇವಸ್ಥಾನ, ಇನ್ನೊಂದೆಡೆ ಅಭಿವೃದ್ಧಿಯ ಸಂಕೇತವಾಗಿ ನವ ಮಂಗಳೂರು ಬಂದರು - ನೋಡಲು ಬಲು ಸುಂದರ.
ಬೀಚ್ ಅಂದರೆ ಯಾರಿಗೆ ತಾನೆ ಇಷ್ಟವಾಗು ವುದಿಲ್ಲ? ಬಾಲರಿಂದ ಹಿಡಿದು ವೃದ್ಧರವರೆಗೆ ಕಡಲ ತಡಿಯ ಸುಂದರ ನೋಟವನ್ನು ನೋಡಿ ಎಲ್ಲರೂ ಆನಂದಿಸುವವರೇ. ನೀಲ ನೀರಿನಲ್ಲಿ ಹೊರಳಾಡಿ, ಉಪ್ಪು$ ನೀರಿನ ರುಚಿ ಸವಿದು ಮರಳಿನಲ್ಲಿ ಚಿತ್ತಾರ ಬಿಡಿಸಿ ಸಂಭ್ರಮಿಸುವವರೇ. ಆಹಾ! ಇಂತಹ ಸುಂದರ ಅನುಭವಕ್ಕೆ ಬಿರು ಬಿಸಿಲಿನ ಈ ಸಮಯವಲ್ಲದೆ ಬೇರೆ ಯಾವ ಸಮಯವಿರಲು ಸಾಧ್ಯ?
ಮಳೆ ಆರಂಭವಾಗುವ ತನಕ ರಾಜ್ಯದ ಎಲ್ಲ ಸಮುದ್ರ ಕಿನಾರೆಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಬಿಸಿಲ ಬೇಗೆಯಿಂದ ಒಂದಿಷ್ಟು ತಂಪಾಗಿರಲು ಬೀಚ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅವುಗಳಲ್ಲಿ ಪಣಂಬೂರು ಬೀಚ್ ಒಂದು. ಒಂದೆಡೆ ಐತಿಹಾಸಿಕ ನಂದನೇಶ್ವರ ದೇವಸ್ಥಾನ, ಇನ್ನೊಂದೆಡೆ ಅಭಿವೃದ್ಧಿಯ ಸಂಕೇತವಾಗಿ ನವ ಮಂಗಳೂರು ಬಂದರು ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೇಂದ್ರದಿಂದ ಎಂಟು ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಈಗಿನ 66ರ ಉಡುಪಿಗೆ ತೆರಳುವ ದಾರಿಯಲ್ಲಿ, ಪಣಂಬೂರು ಬೀಚ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆೆ. ಕರ್ನಾಟಕದ ಪ್ರವಾಸಿ ಭೂಪಟದಲ್ಲಿ ಪಣಂಬೂರು ಬೀಚ್ ತನ್ನದೇ ಆದ ಸ್ಥಾನವನ್ನು ಪಡೆದಿದ್ದು, ದೇಶ ವಿದೇಶದ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ಒತ್ತು ನೀಡುತ್ತಿರುವುದರಿಂದ ರಾಜ್ಯದ ಸಮುದ್ರ ತೀರಗಳು ಬೆಳವಣಿಗೆ ಹೊಂದುತ್ತಿವೆ. ಪಣಂಬೂರು ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಒತ್ತು ನೀಡಿ ಖಾಸಗಿಯವರೊಂದಿಗೆ ಕೈ ಜೋಡಿಸಿದೆ.
ಇಳಿಮುಖವಾದ ಸಾವಿನ ಸಂಖ್ಯೆ : 1995ರಿಂದ 2008ರ ವರೆಗೆ ಸಮುದ್ರ ಪಾಲಾದವರ ಸಂಖ್ಯೆ 115. ಬಳಿಕ ಬಹುತೇಕ ಸೊನ್ನೆ ! ಇದರ ಯಶಸ್ಸು ರಾಷ್ಟ್ರೀಯ ಲೈಫ್ ಸೇವಿಂಗ್ ತಂಡಕ್ಕೆ ಸಲ್ಲಬೇಕು. ನೂರಾರು ಜೀವಗಳನ್ನು ರಕ್ಷಿಸಿದ ಕೀರ್ತಿ ಇವರದು. ವಾರದ ಕಡೆಯ ದಿನಗಳಲ್ಲಿ ಜನಸಾಗರವೇ ಹರಿದು ಬರುತ್ತಿದ್ದು, ಒಂಟೆ ಸವಾರಿ, ಬೋಟಿಂಗ್, ಮಕ್ಕಳಿಗಾಗಿ ಬಲೂನ್ ಬೆಡ್ ಇದೆ.
ಡಾಲ್ಫಿನ್ ಸಫಾರಿ: ಇದೀಗ ಪಣಂಬೂರು ಬೀಚ್ ಡೆವಲಪ್‌ಮೆಂಟ್ ಸಂಸ್ಥೆ ಆಕರ್ಷಣೀಯ ಡಾಲ್ಫಿನ್ ಸಫಾರಿ ಆರಂಭಿಸಿದೆ. ಬೋಟಿನಲ್ಲಿ ಸಮುದ್ರ ಮಧ್ಯೆ ಹೋಗಿ ಡಾಲ್ಫಿನ್ ವೀಕ್ಷಿಸುವುದು ರೋಮಾಂ ಚನಕಾರಿ ಅನುಭವ. ಫೀಸ್ ಮಾತ್ರ 3 ಸಾವಿರ ರೂ. ಡಾಲ್ಫಿನ್ ಸಿಗದೇ ಇದ್ದಲ್ಲಿ ಒಂದೂವರೆ ಸಾವಿರ ರೂ. ವಾಪಸು.
ಪ್ರಬಲ ಅಲೆಗಳು ಸಮುದ್ರದಲ್ಲಿ ಏಳುವುದರಿಂದ ಹಿರಿಯರು ಹೆಚ್ಚಾಗಿ ದಂಡೆಯಲ್ಲೇ ಕಾಲಕಳೆಯಲು ಇಚ್ಛಿಸುತ್ತಾರೆ.ಆದ್ದರಿಂದ ಪಣಂಬೂರು ಬೀಚ್ ಸಮತಟ್ಟಾದ ಪ್ರದೇಶವಾಗಿ ಸ್ಥಳಾವಕಾಶವೂ ಇರುವುದರಿಂದ ಪ್ರವಾಸೋದ್ಯಮ ಇಲಾಖೆ ಹಿರಿಯ ನಾಗರಿಕರಿಗಾಗಿ ಕೃತಕ ಈಜು ಕೊಳನಿರ್ಮಿಸಿದಲ್ಲಿ ಮತ್ತಷ್ಟು ಪ್ರವಾಸಿಗರನ್ನು ಸಳೆಯುವುದರಲ್ಲಿ ಸಂಶಯವಿಲ್ಲ.
ರಸ್ತೆಯ ಅವ್ಯವಸ್ಥೆ: ಸಮೀಪದಲ್ಲೇ ಬಂದರು ಇರುವುದರಿಂದ ದಿನಕ್ಕೆ ನೂರಾರು ಬೃಹತ್ ಟಿಪ್ಪರ್‌ಗಳ ಓಡಾಟದಿಂದ ಬೀಚ್‌ಗೆ ಸಾಗುವ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಧೂಳುಮಯವಾಗಿದೆ. ಇದಕ್ಕಾಗಿ ಪ್ರತ್ಯೇಕ ಬೀಚ್ ಕಾರಿಡಾರ್ ನಿರ್ಮಿಸುವ ಆವಶ್ಯಕತೆಯಿದೆ. ಪ್ರಮುಖ ಪ್ರವಾಸಿ ಕೇಂದ್ರವೆಂದು ಗುರುತಿಸಿದ್ದರೂ ಇದುವರೆಗು ಬಸ್ ಸಂಪರ್ಕ ಕಲ್ಪಿಸಲಾಗಿಲ್ಲ. ಹೆದ್ದಾರಿಯಿಂದ ಬೀಚ್‌ಗೆ ಎರಡು ಕಿ.ಮೀ. ದೂರವಿರುವುದರಿಂದ ಹೆಚ್ಚಾಗಿ ರಿûಾವನ್ನೇ ಅವಲಂಬಿಸಬೇಕಾಗಿದೆ. ವಾರದ ರಜಾ ದಿನಗಳ+ಲ್ಲಾದರೂ ವಿಶೇಷ ವ್ಯವಸ್ಥೆ ಮಾಡಿದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರೂ ಸಾಲುತ್ತಿಲ್ಲ. ಶನಿವಾರ, ರವಿವಾರದಂದು ಕಿ.ಮೀ.ಗಳಷ್ಟು ದೂರ ವಾಹನಗಳ ಸಾಲು ಇರುತ್ತದೆ. ಪಾರ್ಕಿಂಗ್ ಶುಲ್ಕ ದುಬಾರಿ ಎಂದು ನಾಗರಿಕರು ದೂರಿದರೂ ಬೀಚ್‌ನ ಅಭಿವೃದ್ಧಿ ದೃಷ್ಟಿಯಿಂದ ಆವಶ್ಯಕತೆಯಿದೆ ಎಂಬುದು ನಿರ್ವಾಹಕರ ಸಮಜಾಯಿಷಿ.
No comments:
Post a Comment