ಪ್ರವಾಸಿಗರ ಸ್ವರ್ಗ ಉತ್ತರ ಕನ್ನಡ ಜಿಲ್ಲೆ
ಒಂದೆಡೆ ಕರಾವಳಿ, ಇನ್ನೊಂದೆಡೆ ದಟ್ಟ ಹಸಿರನ್ನು ಹೊದ್ದ ಪರ್ವತಗಳು. ಮಲೆನಾಡು, ಬಯಲುಸೀಮೆಗಳ ಮಿಶ್ರಣವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾ 175ಕ್ಕೂ ಅಧಿಕ ಪ್ರವಾಸಿ ತಾಣಗಳಿವೆ.
- "ಪ್ರವಾಸ' ಎಂದಾಕ್ಷಣ ನೆನಪಾಗುವುದು ಉತ್ತರ ಕನ್ನಡ ಜಿಲ್ಲೆ . ಸಹ್ಯಾದ್ರಿಯ ರಮಣೀಯ ತಪ್ಪಲಿನಲ್ಲಿರುವ ಈ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಲೆಕ್ಕವಿಲ್ಲದಷ್ಟು ಇವೆ. ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳೂ ಇವೆ. ಒಂದೆಡೆಗೆ ಕರಾವಳಿ, ಇನ್ನೊಂದೆಡೆ ದಟ್ಟ ಹಸಿರನ್ನು ಹೊದ್ದ ಪರ್ವತಗಳು, ಮಲೆನಾಡು, ಬಯಲುಸೀಮೆ ಗಳ ಮಿಶ್ರಣ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯಲ್ಲಿ ಏನುಂಟು ಏನಿಲ್ಲ. ಎಲ್ಲವೂ ಇದೆ. ಹಾಗೆ ಲೆಕ್ಕ ಹಾಕಿದರೆ ಜಿಲ್ಲೆಯಲ್ಲಿ 175ಕ್ಕೂ ಅಧಿಕ ಪ್ರವಾಸಿ ತಾಣಗಳಿವೆ. ಪಕ್ಕದ ಗೋವಾ, ಬೆಳಗಾವಿಗೆ ಬಂದವರೂ ಇಲ್ಲಿಗೆ ಬರಬಹುದು. ಉತ್ತರ ಕನ್ನಡ - ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಜೋಗ ಜಲಪಾತ ಜಗದ್ವಿಖ್ಯಾತ. ದಕ್ಷಿಣ ಭಾರತದ ಏಕಮೇವ ನೈಸರ್ಗಿಕ ರಿವರ್ ರ್ಯಾಫ್ಟಿಂಗ್ ದಾಂಡೇಲಿ ಸಮೀಪ ಕಾಳಿ ನದಿಯಲ್ಲಿದೆ.ಈ ಜಿಲ್ಲೆಯನ್ನು ಜಲಪಾತಗಳ ಜಿಲ್ಲೆ, ಬೀಚಿನ ಜಿಲ್ಲೆ, ಪರಿಸರ ಜಿಲ್ಲೆ, ಐತಿಹಾಸಿಕ ಜಿಲ್ಲೆ , ಸಾಂಸ್ಕೃತಿಕ ಜಿಲ್ಲೆ , ಕೈಗಾರಿಕೆಗಳ ಜಿಲ್ಲೆ, ವನಸ್ಪತಿಗಳ ಜಿಲ್ಲೆ ಎಂದೆಲ್ಲ ಗುರುತಿಸಬಹುದು.
ಉತ್ತರ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಯಾವುವು ಮತ್ತು ಅವುಗಳು ತಾಲೂಕು ಕೇಂದ್ರದಿಂದ ಇರುವ ದೂರ ಎಷ್ಟು ಎಂಬುದನ್ನು ತಿಳಿದುಕೊಂಡರೆ ನಮ್ಮ ಪಯಣ ಬಹುಮಟ್ಟಿಗೆ ಸುಗಮ:
ಕಾರವಾರದಿಂದ
ಟ್ಯಾಗೋರ್ ಬೀಚ್ - 2 ಕಿ.ಮೀ.
ದೇವ್‌ಭಾಗ್ ರೆಸಾರ್ಟ್ಸ್ - 7 ಕಿ.ಮೀ.
ಸಂಜೇಶ್ವರ ದೇವಸ್ಥಾನ - 4 ಕಿ.ಮೀ.
ಶಾಂತದುರ್ಗ ದೇವಸ್ಥಾನ - 6 ಕಿ.ಮೀ.
ತಿಲಮತಿ ಬೀಚ್ - 8 ಕಿ.ಮೀ.
ಶಿರಸಿಯಿಂದ
ಮಧುಕೇಶ್ವರ ದೇವಸ್ಥಾನ - 24 ಕಿ.ಮೀ.
ಸಹಸ್ರಲಿಂಗ - 12 ಕಿ.ಮೀ.
ಗಣೇಶ ಫಾಲ್ಸ್ - 39 ಕಿ.ಮೀ.
ಸೋದೆ ಸ್ವರ್ಣವಲ್ಲೀ ಮಠ - 20 ಕಿ.ಮೀ.
ಶಿವಗಂಗಾ ಜಲಪಾತ - 24 ಕಿ.ಮೀ.
ಸಿದ್ಧಾಪುರದಿಂದ
ರೇಣುಕಾ ದೇವಾಲಯ - 16 ಕಿ.ಮೀ.
ಜೋಗ - 22 ಕಿ.ಮೀ.
ಭುವನಗಿರಿ - 8 ಕಿ.ಮೀ.
ಯಲ್ಲಾಪುರದಿಂದ
ಕವಡೀಕೆರೆ - 10 ಕಿ.ಮೀ.
ಜೇನುಕಲ್ಲು ಗುಡ್ಡ - 20 ಕಿ.ಮೀ.
ಸಾತೊಡ್ಡಿ ಜಲಪಾತ - 30 ಕಿ.ಮೀ.
ಲಾಲಗುಳಿ ಜಲಪಾತ - 13 ಕಿ.ಮೀ.
ಕುಮಟಾದಿಂದ
ಯಾಣ - 28 ಕಿ.ಮೀ.
ಗೋಕರ್ಣ - 36 ಕಿ.ಮೀ.
ಓಂ ಬೀಚ್ - 42 ಕಿ.ಮೀ.
ಜೋಯಿಡಾದಿಂದ
ಆಕಳಗವಿ - 32 ಕಿ.ಮೀ.
ಸೂಪಾ ಅಣೆಕಟ್ಟು - 21 ಕಿ.ಮೀ.
ಕವಳಾಗುಹೆ - 27 ಕಿ.ಮೀ.
ಸಿಂಥೇರಿ ರಾಕ್ಸ್ - 20 ಕಿ.ಮೀ.
ಉಳವಿ - 35 ಕಿ.ಮೀ.
No comments:
Post a Comment