ಪ್ರವಾಸಿ ತಾಣಗಳ ಮರಗಳು, ಶಿಲ್ಪಗಳ ಮೇಲೆ ಶಾಶ್ವತವಾಗಿ ಉಳಿಯುವಂಥ ಕೆತ್ತನೆ ಕೀಟಲೆಗೆ ಕೈ ಹಾಕಬೇಡಿ.ಇಂಥ ಕ್ರಿಯೆ ಮಾಡುವವರಿಗೆ ತಿಳಿಹೇಳಿ. ಪ್ರಯಾಣಕ್ಕೆ ತೆರಳಿದ ತಾಣ ನೆನಪಿನಲ್ಲಿ ಉಳಿಸಿಕೊಳ್ಳುವ ಮನಸ್ಸು ನಿಮ್ಮದಾಗಿರಲಿ. ಸೂಚನೆ: ಚಿತ್ರಗಳ ಮೇಲೆ ಕ್ಲಿಕ್ಕಿಸಿ ಗ್ರಾತ್ರವನ್ನು ಹಿರಿದಾಗಿಸಿ ಓದುವ ಅನುಕೂಲವಿರುತ್ತದೆ.

Saturday, June 25, 2011

ಭಲ್ಲುಂಕೆಯಾಗಿದ್ದ ಭಾಲ್ಕಿ


ಶಾಸನಗಳಲ್ಲಿ ಭಲ್ಲುಂಕೆ ಎಂದು ಹೆಸರಾಗಿರುವ ಭಾಲ್ಕಿ ಬೀದರ ಜಿಲ್ಲೆಯ ಮತ್ತೂಂದು ತಾಲೂಕು ಕೇಂದ್ರವಾಗಿದೆ.
ಶಾಸನಗಳಲ್ಲಿ ಭಲ್ಲುಂಕೆ ಎಂದು ಹೆಸರಾಗಿರುವ ಭಾಲ್ಕಿ ಬೀದರ ಜಿಲ್ಲೆಯ ಮತ್ತೂಂದು ತಾಲೂಕು ಕೇಂದ್ರವಾಗಿದೆ. ಬೀದರದಿಂದ ಪಶ್ಚಿಮ ದಿಕ್ಕಿನಲ್ಲಿ 40 ಕಿ.ಮೀ. ದೂರದಲ್ಲಿ ಸ್ಥಿತವಾಗಿರುವ ಭಾಲ್ಕಿ ರಾಜಾ ರಾಮಚಂದ್ರ ಜಾಧವನು ಕಟ್ಟಿಸಿದ ಕೋಟೆ, ಪಟ್ಟಣದಲ್ಲಿ ಭಾಲ್ಕೇಶ್ವರ ಮತ್ತು ಕುಂಭೇಶ್ವರ ದೇಗುಲಗಳು ಭವ್ಯವಾಗಿವೆ. 
ಕುಂಭೇಶ್ವರ ದೇವಾಲಯದಲ್ಲಿನ ಕುಳಿತ ಹನುಮಂತ, ನಿಂತ ಗಣೇಶ ಮೂರ್ತಿಗಳು ಅಪರೂಪವಾಗಿವೆ. ಇಲ್ಲಿ ಅನೇಕ ಶರಣರ ಸ್ಮಾರಕಗಳಿವೆ. ಇದೇ ತಾಲೂಕಿನಲ್ಲಿ ಬರುವ ಖಾನಾಪೂರದಲ್ಲಿ ಮೈಲಾರ ಲಿಂಗೇಶ್ವರ ದೇವಾಲಯವಿದೆ. ಇದು ಬೀದರದಿಂದ 15 ಕಿ.ಮೀ. ದೂರದಲ್ಲಿದ್ದು ಪಶ್ಚಿಮ ದಿಕ್ಕಿಗೆ ಬೀದರ ಭಾಲ್ಕಿಯ ರಸ್ತೆಯ ಮೇಲೆ ಇರುತ್ತದೆ. ಇಲ್ಲಿನ ಪ್ರಕೃತಿ ರಮ್ಯ ಪ್ರಶಾಂತ ಪರಿಸರ ನೀರಿನ ಝರಿ ಮರೆಯಲಾರದಂತಿದೆ.

ಚಳಕಾಪೂರ ಹನುಮಾನ ಮಂದಿರ
ಚಳಕಾಪೂರ ಹನುಮಾನ ಮಂದಿರ ಪ್ರಸಿದ್ಧ ದೇವಾ ಲಯವಾಗಿದ್ದು ಪ್ರತಿವರ್ಷ ಇಲ್ಲಿ ಜಾತ್ರೆ ಜರಗುತ್ತದೆ. ಅದೇ ರೀತಿ ಗುಡ್ಡದ ಮೇಲೆ ಚಾಲುಕಮ್ಮನ ದೇವಾಲಯವು ಇರುವುದು ವಿಶೇಷವಾಗಿದೆ.
ಹಾಗೆಯೇ ಭಾಲ್ಕಿ ತಾಲೂಕಿನಲ್ಲಿ ಸಿದ್ದೇಶ್ವರ ಗ್ರಾಮದಲ್ಲಿ ಸಿದ್ದೇಶ್ವರ ದೇವಾಲಯ ಪ್ರಸಿದ್ಧಿ ಪಡೆದಿದ್ದು , ಪ್ರತಿವರ್ಷ ಜಾತ್ರೆ ನಡೆಯುತ್ತದೆ.
ಔರಾದ ತಾಲೂಕು
ಬೀದರಿನಿಂದ ಉತ್ತರ ದಿಕ್ಕಿಗೆ 50 ಕಿ.ಮೀ. ದೂರದಲ್ಲಿ ಔರಾದ ಪಟ್ಟಣದ ಮಧ್ಯೆ ಅಮರೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಅಮರವಾಡಿ -  ಅವರಾದಿ - ಔರಾದಿ ಆಗಿರುವುದೆಂದು ಭಾಷಾ ತಜ್ಞರು ಹೇಳುವರು. ಆ ದೇವರ ಹೆಸರಿನಿಂದಲೇ ಈ ನಗರಕ್ಕೆ ಔರಾದ ಎಂದು ಕರೆಯುವರು. ಅಮರೇಶ್ವರ ದೇವರ ದೇವಾಲಯವು ಭವ್ಯವಾಗಿದ್ದು ನಗರದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ ಒಂಟೆ ಮಾರಾಟದ ಕೇಂದ್ರ ಪ್ರಸಿದ್ಧಿ ಪಡೆದಿರುತ್ತದೆ.
 







ಔರಾದ ತಾಲೂಕು ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆವೃತ್ತವಾಗಿರುತ್ತದೆ. ಈ ತಾಲೂಕಿನಲ್ಲಿ ಬರುವ ಚೊಂಡಿ ಮುಖೇಡ್‌ ಗ್ರಾಮವು ಮಹಾರಾಷ್ಟ್ರದ ಪ್ರದೇಶದಿಂದ ಸುತ್ತುವರಿದಿರುವುದು ವಿಶೇಷವಾಗಿರುತ್ತದೆ.
ಬೀದರ ಜಿಲ್ಲೆಗೆ ಬೆಂಗಳೂರಿನಿಂದ ರೈಲು ಹಾಗೂ ಬಸ್ಸುಗಳ ಸೌಲಭ್ಯ ಕೂಡಾ ಇರುತ್ತದೆ. ಅದೇ ರೀತಿ ಆಂಧ್ರಪ್ರದೇಶದ ರಾಜಧಾನಿ ಹೈದ್ರಾಬಾದಿನಿಂದ ಬಸ್ಸು ಓಡಾಟ ಸಾಕಷ್ಟು ಇದ್ದು , ರೈಲು ಸೌಲಭ್ಯ ಕೂಡಾ ಇರುತ್ತದೆ. ಅದೇ ರೀತಿ ನೆರೆಯ ಗುಲ್ಬರ್ಗಾದಿಂದಲೂ ಬಸ್ಸುಗಳ ಸೌಲಭ್ಯ ನಿರಂತರವಾಗಿ ಇರುತ್ತದೆ.

No comments:

Post a Comment